——————————————–—————
ಪುಟ್ಟ ಪುಟ್ಟ ಕೈಗಳು, ಕೆನ್ನೆ ಬೊಟ್ಟು ಬೋಕ ಗುಳಿಯು
ನಕ್ಷತ್ರ ಚುಕ್ಕಿ ಹಾಗೆ ಬೆಳ್ಳ ಬೆಳ್ಳನ ಬೆರಳು ಉಗುರು
ಮುಂಗೈ ಹಿಡಿದ ಮುಟುಕಿಯಲ್ಲಿ ಬ್ರಹ್ಮನ ಗಂಟು ನಂಟು
ಆಗೊಮ್ಮೆ ಈಗೊಮ್ಮೆ ಬೆರಳು ತೋರಿ ಅಳುವ ಆ ಸೊಗಸು….
ತೆರೆದ ಮುಷ್ಟಿಗಂಟಿನೊಳಗೆ ಹೆಪ್ಪುಗಟ್ಟಿದ ಕೆಂಪು ಬಣ್ಣ
ಬೆರಳ ಮಡಿಚಿ ಮುಂಗೈ ಹಿಚುಕಿ ಗುಮುಟಿ ಚಿವುಟಿ
ಅಗಲ ತೊಡೆಯು, ಬಾಳೆ ಗೊನೆಯು, ಮೇಲೆ ಕೆಳಗೆ ಅಲಗಿ
ಜೆಟ್ಟಿಯಂತೆ ಕಾಲು ತಟ್ಟಿ ಮೆತ್ತಗೆ ಒದೆವ ಗತ್ತು…
ಅಂಗಾಲು ಚಂದ ಹೊಳಪಲಿ ಹಿಂದೆ ಮುಂದೆ ಹಿಂದೆ ಮೇಲೆ ಕೆಳಗೆ ಆಡಿಸಿದರೆ ಗೆಜ್ಜೆಯ ಗಿಲ ಗಿಲ ಪಂದ್ಯ ಪಾದ ಪುಟಿಸಿ ಹಣೆಗೆ ಹಚ್ಚಿರೆ ಮೆತ್ತನೆಯ ದೇವ ದೃಷ್ಠಿ ಹಿಡಿದು ಕೈಯ ಹೆಜ್ಜೆ ನಡೆಸಿರೆ ಅದೇ ಕೃಷ್ಣನ ಸೃಷ್ಟಿ …
ದುಂಡನೆ ಸೊಂಟ ತೊಗಟೆ ಗುಂಟ ಬೆಳ್ಳಿ ಉಡುದಾರ ಪುಟ್ಟ ಆನೆಯ ಹೊರೆಯು, ತಿರುವು ಮುರುವು ನಡೆಯು ಪಕ್ಕನೆ ನಕ್ಕರೆ ತೂಗುವ ಹೊಟ್ಟೆ ಹಿಂದೆ ಮುಂದೆ ಸರಿದು ನಡೆವ ಬೆಡಗು ಜೋಲಿಹೊಡೆಯು ಬೀಳದ ತುಲನೆಯು...
ಮುಖದಲಿದೆ ಶುದ್ಧತೆಯ ಬಣ್ಣ ಶಾಂತತೆಯ ಬಿಳಿಯ ಮೇಳ ಸಣ್ಣ ಮೂಗು, ಮಿಡಿವ ಬಾಯಿ, ಗುಲಾಬಿ ತುಟಿಯ ಹೋಳು ಇಷ್ಟಗಲ ಕಣ್ಣು, ಕರ್ರನೆ ರೆಪ್ಪೆ, ಅದರಲ್ಲಿ ಮುಗ್ದ ಹೊಳಪು ಪಿಳಿಕಿಸಿ ನಕ್ಕರೆ ಮುತ್ತಿನ ಮಳೆ ವಜ್ರದ ಮಿಂಚು ಬೆಳಕು… ದುಂಡನೆ ಮುಖ ಹೊಳೆವ ಕಳೆ ಬಂಗಾರ ಸೆಳೆವ ಮೆಚ್ಚು ಉಬ್ಬಿದ ಗಲ್ಲ ಸೊಬಗಿನ ಸೊಲ್ಲ ಕಡಿದರೆ ಕುಡಿಕೆ ಬೆಲ್ಲ ಗದ್ದದ ಗುಮಟೆ ಸೋರುವ ಜೊಲ್ಲು ನಕ್ಕರೆ ಅದೇ ಸ್ವರ್ಗ ನಿದ್ದೆಯ ನಗುವು ಕನಸಿನ ಸೆಳವು ದೇವರ ಜೊತೆಗೆ ಮಾತು… ಮಲಗಿದ ಮಗು ತಟ್ಟನೆ ಎದ್ದು ತೆರೆದ ಅಗಲ ಕಣ್ಣು ಪಿಚ್ಚಿನ ಹೊನ್ನು ಅತ್ತರೆ ಸುರಿವ ಮುತ್ತಿನ ಕಣ್ಣೀರ ಚೆನ್ನು ಎಣ್ಣೆಯ ತಿಕ್ಕಿ ಸುಡು ನೀರ ಸುರಿವಿ ಬಟ್ಟೆಯಲಿ ಬೆಚ್ಚಗೆ ಸುತ್ತಿ ತೊಟ್ಟಿಲ ತೂಗಿ ಮಲಗಿಸಿದರೆ ಅದೊಂದು ಸ್ವರ್ಗ ಸ್ತುತಿಯು…
———————————————–—————-
ಬಸವರಾಜ ಗದಿಗೆಪ್ಪಗೌಡರ
ವಾವ್ ಅದ್ಭುತ ಬರಹ ಸರ್.
LikeLike
ಪ್ರದೀಪ, ಧನ್ಯವಾದಗಳು…
LikeLiked by 1 person
Wonderful 👌👌
LikeLike
ಶಿವಕುಮಾರ್, ಧನ್ಯವಾದಗಳು…
LikeLike